Skip navigation

ಮೈದಾನದಲ್ಲಿ ಇಂಡಿಯಾ ಇಂಡಿಯಾ ಎಂದು ಕೂಗುವುದೋ, ಮುಖಕ್ಕೆ ಬಣ್ಣ ಬಳಿದು ಕುಣಿದು ಕುಪ್ಪಳಿಸುವುದೋ, ಇಲ್ಲವೇ ಪಂದ್ಯ ಗೆದ್ದ ಮೇಲೆ ಬಾರಿಗೋಗಿ ಎಣ್ಣೆ ಹೊಡೆದು ರಸ್ತೆಯಲ್ಲಿ ಹೋ ಎಂದು ಕಿರಿಚುವುದೇ ದೇಶಪ್ರೇಮ ತೋರಿಸುವ ಮಾರ್ಗ ಅನಿಸುವಂತಹ ಸ್ಥಿತಿ ಇದೆ ನಮ್ಮ ಹಲವು ಯುವಕರಲ್ಲಿ.

thatskannada.com

ಕೋಣೆಯೊಳಗೆ ಕತ್ತಲಿನಾಗೆ ನಡೆಯುವಂತ ಒಂದೇ ತಪ್ಗೆ ತುಂಬಿತು ತುಳುಕಾಡಿತು ಪರದೇಸಿ ಪ್ರಪಂಚ
– ತುಷಾರ್ ರಂಗನಾಥ್

ಮತ್ತೆ ಮತ್ತೆ ಬರಬೇಕು ಹುಚ್ಚು ಸಂದೇಶ; ಕದ್ದು ಮುಚ್ಚಿ ಓದೋಕೆ ಏನೋ ಸಂತೋಷ

– ಜಯಂತ ಕಾಯ್ಕಿಣಿ

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ
– ಗೋಪಾಲಕೃಷ್ಣ ಅಡಿಗ

ಕನಸಿನ ತುಂಬ ಕಥೆ ಬರೆದ, ನೆನಪಿನ ತುಂಬ ಸಿಹಿ ಸುರಿದ. ಮರೆಯದ ಪ್ರೇಮ ಪುಟ ಇವಳು, ಎದೆಯಲಿ ಗಾಳಿಪಟ ಇವಳು.
– ಹಂಸಲೇಖ

ಕೈಯಿ ನಡೆಯೋ ಕಾಲ ಕೈಗೊಬ್ಬ ಕಾಲ್ಗೊಬ್ಬ, ಕೈ ಸೋತ ಕಾಲಕ್ಕೆ ಬಿಡುತಾರೋ ಕೈಯ ಬಿಡುತಾರೋ
ಹೊಳೆ ತುಂಬಿ ಹರಿವಾಗ ದೊಣೆಗಾರ ದೇವರು, ಹೊಳೆಯ ದಾಟಿದ ಮೇಲೆ ಅವನ್ಯಾರೋ ತಮ್ಮ ಇವನ್ಯಾರೋ
– ಹೆಚ್ ಎಸ ವೆಂಕಟೇಶ್ ಮೂರ್ತಿ

ಲೇ ಶಶೀ, ಬರೀ ಐಸ್ ಕ್ರೀಂನಲ್ಲೇನಿದೆಯೇ  ಖುಶಿ. ಹಸಿ ಹೆಣ್ಣೇ ಹಿಡಿ, ಈ ಅಮೆರಿಕ ಕಾಕ್ಟೇಲ್ ಕುಡಿ.ಸುಡಲಿ ನಿನ್ನ ಮಡಿ.
– ಬಿ ಆರ್ ಲಕ್ಷ್ಮಣರಾವ್

ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ; ಕನ್ನ ಕೊರೆದು ದೋಚಿಕೊಂಡ ಕನಸುಗಳಿಗೆ ಪಾಲುದಾರ.
– ಜಯಂತ್ ಕಾಯ್ಕಿಣಿ

ಏಳುಸುತ್ತಿನ ಕೋಟೆ ಅಮಾಯಕವಾಗಿ ಬಿದ್ದುಕೊಂಡಿತ್ತು. ಯುದ್ಧದ, ರಹಸ್ಯದ, ಪಿತೂರಿಯ, ಸೈನಿಕತನದಲ್ಲಿ ಉಶ್ ಉಶ್ ಆಗಿಹೋದ ಅದೆಷ್ಟೋ ಪ್ರೇಮಗಾಥೆಗಳ, ವಿರಹದುರಿಯ ಕೊಲ್ಯಾಜಿನಂತೆ ಕಂಡಿತು.

– ಚೇತನ ತೀರ್ಥಹಳ್ಳಿ

ನಮ್ಮ ಗ್ವಾಡ್ಯಾಗ ಕುಂಡ್ರಾಸ್ತೀವಿ ನಳ ಕೆಳಗೆ ಹನಿ ಹನಿ ಬೀಳ.
– ಕಲಿಯುಗದ ಕುಡುಕ ನಾಟಕದಿಂದ